ಒಟ್ಟು ಪುಟವೀಕ್ಷಣೆಗಳು

ಶನಿವಾರ, ಫೆಬ್ರವರಿ 7, 2015

"ಬೆಳದಿಂಗಳ ಬಾಲೆ"

   
                                                                                                                                 
 
ಈ ಕೆಳಗಿನ ಕವನವನ್ನು ಬರೆಯಲು ಪ್ರೇರಣೆ ಸುನಿಲ್ ಕುಮಾರ್ ದೆಸಾಯಿ ಹಾಗೂ "ಬೆಳದಿಂಗಳ ಬಾಲೆ" ಚಿತ್ರತಂಡ. ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. 
**********************************************************************
 

"ಬೆಳದಿಂಗಳ ಬಾಲೆ"


ಅವಳ ಮನೆಯ ದೂರವಾಣಿ ಸಂಖ್ಯೆ
ಕಂಡು ಹಿಡಿಯದೆ ಸೋಲುವನೆಂಬ ಶಂಕೆ
ಎಷ್ಟು ಹುಡುಕಿದರು ಸಿಗದ ಅವಳ ಅಂಖ್ಯೆ
--------------------------------------------
ಅವಳ ಮಾತುಗಳೆಲ್ಲಾ ಪದಬಂಧ
ಪರವಶನಾದೆ ತಿಳಿಯದೆ ಎನೋ ಆನಂದ
ಪ್ರಶ್ನೆಯ ಮೇಲೆ ಪ್ರಶ್ನೆಯ ಕಲರವ
ಉತ್ತರಿಸಲು ಸುಂದರ ಅನುಭವ
--------------------------------------------
ಕೊನೆಗೂ ಸೋತೆ ಆಟವಾಡಿ ಚದುರಂಗವ
ಅದರೆ, ಗೆದ್ದೆ ಬಾಳ ಸಂಗಾತಿಯ ಅಂತರಂಗವ
ಗೋತ್ತಾಯಿತು ಅವಳಿರುವ ತಾಣ
ದೇವರು ಬಿಟ್ಟ ನಮ್ಮಿಬ್ಬರ ಕನಸ್ಸುಗಳಿಗೆ ಬಾಣ
--------------------------------------------
ಅವಳು ಬರೆದ ಕಡೆಯ ಪ್ರೇಮ ಪತ್ರ
ಕಣ್ಣಿರಿನಿಂದ ನೆನೆದು ಹೋಯಿತು ಓದುವಾಗ ಪತ್ರ
ನನ್ನಲ್ಲಿ ಸೇರುವುದು ಅವಳ ಬಯಕೆ
ನನ್ನ ನೋಡದೆ ಹೋದಳು ಏಕೆ
 --------------------------------------------
ಅವಳ ಜೀವವನ್ನು ನುಂಗಿದ ರೋಗ
ಸಾವು, ನನ್ನ ಜೀವನದಲ್ಲಿ ಅವಳಿರದ ಭಾಗ
ನೋಡಲು ಹೋದೆ ಅವಳನ್ನು ಕೊನೆಯ ಬಾರಿಗೆ
ಧ್ಯೆರ್ಯ ಸಾಲದೆ, ಹಿಂದಿರುಗಿದೆ ಬಂದ ದಾರಿಗೆ
---------------------------------------------
ವಾಸ್ತವದಲ್ಲಿ ಅವಳಿಲ್ಲದ ಬದುಕಿನ ಓಲೆ
ಮನದ ಮರೆಯಲ್ಲಿ  ನಿನೋಂದು ಸುಮಧುರ ಅಲೆ
ಕಲ್ಪನೆಯಲ್ಲೆ ಉಳಿದೆ ನೀ ಬೆಳದಿಂಗಳ ಬಾಲೆ
--------------------------------------------
                                                  
                          ಲೋಕೇಶಗೌಡ ಜೋಳದರಾಶಿ


Copyright ©www.baalkani.com. All rights reserved.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Blog Visitors