"ಬಾಲ್ಯದ ಸವಿನೆನಪುಗಳು"
ಬಾಲ್ಯದಲ್ಲಿ
ನಾವು ಕಲಿತ ಶಾಲೆ
ನಮ್ಮ ಜೀವನದ ಮರೆಯಲಾಗದ ಸುಂದರ
ಓಲೆ
-----------------------------------------
ಹೊಸ ಬಟ್ಟೆಯಲಿ ಹೊರಟು ನಿಂತೆವು
ಅಮ್ಮನ ಮಡಿಲಲಿ ಅಳುವ ಕಂಡೆವು
-----------------------------------------
ಅಮ್ಮನ ಕೈಹಿಡಿದು ಹೊರೆಟೆವು ಶಾಲೆಗೆ
ಎಡವಿ ಬಿದ್ದೆವು ಪೆಟ್ಟಾಯಿತು ಕಾಲಿಗೆ
-----------------------------------------
ಸಮಯಕೆ ಹೊಗದೆ ನಿಂತೆವು ತರಗತಿಯ
ಹೊರಗಡೆ
ನೀರು ಹರಿಯ ತೊಡಗಿತು ಚಡ್ಡಿಯ
ಒಳಗಡೆ
-----------------------------------------
ಒಳಗಡೆ ಕರೆದು ಎಚ್ಚರಿಸಿದ ಶಿಕ್ಷಕರು
ನೋಡಿ ನಗಲಾರಂಬಿಸಿದರು ತರಗತಿಯಲಿ ಎಲ್ಲರು
------------------------------------------
ವಿದ್ಯೆ-ಬುಧ್ಧಿ ಕಲಿಸಿದ ಗುರುಗಳು
ಸದಾ ನೆನೆವೆವು ನಮ್ಮ ಮನಸುಗಳು
------------------------------------------ಗೆಳೆಯರ ಜೊತೆ ಆಡುತಿದ್ಡೆವು ಆಟ
ಶಾಲೆಯ ಗಂಟೆ ಹೊಡೆಯಲು ಮನೆಗೆ
ಓಟ
------------------------------------------
ಅರಿಯದೆ
ಮರೆತೆವು ಮನೆಯ ಹಾದಿ
ಪ್ರೀತಿಯ
ಅಮ್ಮನ ನೋಡಿ ಓಡಿದೆವು ಬೀದಿ
ಬೀದಿ
-------------------------------------------
ನಾವೆಲ್ಲರು
ಬೆಳೆಸೊಣ ಶಿಕ್ಷಕರಿಗೆ ಗೌರವಿಸುವ ಕಲೆ
ಅರಿಯೊಣ
ಅರ್ಥಪೂರ್ಣ ಜೀವನದ ಬೆಲೆ
-------------------------------------------
ಬಾಲ್ಯದಲ್ಲಿ
ನಾವು ಕಲಿತ ಶಾಲೆ
ನಮ್ಮ ಜೀವನದ ಮರೆಯಲಾಗದ ಸುಂದರ
ಓಲೆ
----------------------------------------------------
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ